College History Management Committee Departments Various Association Sports Page This year events Library Download the articles Course & Fees Details Online Results & Attendance Report Latest News UPMC Home Page

Placement Portal

(A Unit of Dr. T.M.A. Pai Foundation, Manipal)

One of the pioneers of

NAAC Report

Manipal

Alumni Association

Parent Teachers Association (Accredited with B++ Grade by NAAC)
Non Teaching Staff
Student Welfare Council

ACTIVITIES 2011-12

Contact
Guest Book
 

Tonse Upendra Anantha Pai

 

 

26-11-1895 to 13-12-1956

ಹಿಂದಿಯಿಂದ ರಾಷ್ಟ್ರೀಯ ಭಾವೈಕ್ಯ - ಡಾ. ಸುಕನ್ಯಾ ಮಾರ್ಟಿಸ್

ರಾಷ್ಟ್ರಗೀತೆ, ರಾಷ್ಟ್ರಧ್ವಜಗಳಂತೆ ರಾಷ್ಟ್ರಭಾಷೆಯಾದ “ಹಿಂದಿ”ಗೂ ಮಾನ್ಯತೆ ದೊರೆಯಬೀಕು. ಜಗತ್ತಿನ ಅತಿಹೆಚ್ಚು ಜನರು ಹಿಂದಿ ಮಾತನಾಡುವವರಾಗಿದ್ದು ರಾಷ್ಟ್ರೀಯ ಏಕತೆಯನ್ನು ಸಾಧಿಸುವಲ್ಲಿ ಅದು ಅಗ್ರಮಾನ್ಯವಾಗಿದೆ ಎಂದು ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಹಿಂದಿ ಉಪನ್ಯಾಸಕಿ ಡಾ.ಸುಕನ್ಯಾ ಮಾರ್ಟಿಸ್ ಹೇಳಿದರು.

ಅವರು ಇತ್ತೀಚೆಗೆ ಸ್ಥಳೀಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಯೋಜಿಸಲಾದ ಹಿಂದಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪದವಿಯ ನಂತರದ ಹಿಂದಿಯ ಉನ್ನತಾಭ್ಯಯನಕ್ಕೆ ನಮ್ಮಲ್ಲಿ ಅವಕಾಶವಿಲ್ಲದಿರುವುದರ ಬಗ್ಗೆ ಖೈದವನ್ನು ವ್ಯಕ್ತಪಡಿಸಿದ ಅವರು ಇದಕ್ಕಾಗಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೋರಾರನಡೆಸಬೇಕು ಎಂದು ಹೇಳಿದರು. ಅಧ್ಯಕ್ಷರಾದ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕೃಷ್ಣಮೂರ್ತಿ ಕೆ. ಇವರು ಹಿಂದಿಯಲ್ಲಿ ಮಾತನಾಡಿ ಹಿಂದಿಯನ್ನು ಕಲಿಯುವ ಬಗೆಗಿನ ಆಧುನಿಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕಾಲೇಜಿನ ಹಿಂದಿ ಉಪನ್ಯಾಸಕಿ ಶ್ರೀಮತಿ ನಿರ್ಮಲಾ ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿ ಮೊಹಮದ್ ಫರಾಜ್ ವಂದಿಸಿದರು. ಅಂತಿಮ ಬಿ.ಬಿ.ಎಂ. ವಿದ್ಯಾರ್ಥಿ ಸತ್ಯರಾಜ್ ಕಾರ್ಯಕ್ರಮ ನಿರ್ವಹಿಸಿದರು.

ಹಿಂದಿ ದಿನಾಚರಣೆ ಪ್ರಯುಕ್ತ ಆಯೋಜಿಸಲಾದ ಸಂಗೀತ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ವಿದ್ಯಾರ್ಥಿನಿ ಮಹಾಲಸಾ ಕಿಣಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ರಕ್ತದಾನದಿಂದ ಪ್ರಾಣರಕ್ಷಣೆಯ ಮಹಾಪುಣ್ಯ - ಡಾ| ಶರತ್ ಕುಮಾರ್

 ಇನ್ನೊಬ್ಬರ ಪ್ರಾಣ ಉಳಿಸಲು ಕೊಡುವ ರಕ್ತವು ಅತ್ಯಮೂಲ್ಯವಾಗಿದ್ದು ಇಂತಹ ರಕ್ತದಾನದಿಂದ ಪ್ರಾಣರಕ್ಷಣಿಯ ಮಹಾಪುಣ್ಯ ದೊರೆಯುವುದಾಗಿ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದ ನಿರ್ದೇಶಕರಾದ ಡಾ| ಶರತ್ ಕುಮಾರ್ ಹೇಳಿದರು.

 ಅವರು ಇತ್ತೀಚೆಗೆ ಸ್ಥಳೀಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನ ಘಟಕವು ಹಮ್ಮಿ ಕೊಂಡ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸ್ವಯಂಪ್ರೇರಿತ ರಕ್ತದಾನವು ಬೆಳೆದು ಬಂದ ಬಗೆಯನ್ನು ಈ ಸಂದರ್ಭದಲ್ಲಿ ವಿವರಿಸಿದ ಅವರು ಇಂತಹ ರಕ್ತದಾನವು ದಾನಿಯ ವೈಯಕ್ತಿಕ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಮತ್ತೊಬ್ಬನ ಪ್ರಾಣ ರಕ್ಷಿಸಲು ಸಹಾಯವಾಗುತ್ತದೆ.  ದಾನಗಳಲ್ಲೇ ಅತ್ಯಂತ ಶ್ರೇಷ್ಠ ದಾನವಾಗಿ ರಕ್ತದಾನವು ಇಹ ಪರಗಳ ಶ್ರೇಯಸ್ಸಿಗೆ ಕಾರಣವಾಗುವುದಾಗಿಯೂ ಅವರು ಹೇಳಿದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕೃಷ್ಣಮೂರ್ತಿ ಕೆ. ಅಧ್ಯಕ್ಷ ಸ್ಥಾನದಿಂದ ಮಾತನಾಡಿ ಶಿಕ್ಷಣದ ಜೊತೆಗೆ ಸಮಾಜ ಸೇವೆಗೆ ಇರುವ ಉತ್ತಮ ಅವಕಾಶವನ್ನಾಗಿ ರಕ್ತದಾನವನ್ನು ಬಳಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ಇತ್ತರು. ಭಾಷಾ ವಿಭಾಗ ಮುಖ್ಯಸ್ಥ ಡಾ| ಮಧುಸೂದನ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಾಣಿಜ್ಯ ಉಪನ್ಯಾಸಕ ಚಂದ್ರಶೇಖರ್  ಧನ್ಯವಾದವಿತ್ತರು.  ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ          ಶ್ರೀ ರಾಜೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ವಿಷಯದ ಅಳವಾದ ಅಧ್ಯಯನ ವಿದ್ಯಾರ್ಥಿಗಳ ಗುರಿಯಾಗಬೇಕು- ಎನ್.ಗುರುರಾಜ

 “ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಅತ್ಯಂತ ಅಗತ್ಯ. ಅದು ಪಠ್ಯ ವಿಷಯವಾಗಿರಲಿ ಅಥವಾ ಪಠ್ಯೇತರ ವಿಷಯವಾಗಿರಲಿ,  ಜ್ಞಾನಾರ್ಜನೆಯ ದೃಷ್ಟಿಯಿಂದ ಅತ್ಯಂತ ಅಗತ್ಯ. ಇಂದಿನ ವಿದ್ಯಾರ್ಥಿಗಳು ಎಲ್ಲಾ ವಿಷಯಗಳನ್ನು ಲಘುವಾಗಿ ಪರಿಗಣಿಸುವ ಮನೋಧರ್ಮವನ್ನು ಬೆಳಸಿಕೊಂಡಿದ್ದಾರೆ ಆದರೆ ಜ್ಞಾನಾರ್ಜನೆಯ ದೃಷ್ಟಿಯಿಂದ ವಿಷಯದ ಅಳವಾದ ಅಧ್ಯಯನ ವಿದ್ಯಾರ್ಥಿಗಳ ಗುರಿಯಾಗಬೇಕು. ತನಗೆ ಅನಿಸಿದ್ದನ್ನು ತನ್ನಲ್ಲಿಯೇ ಚಿಂತನೆ ನಡೆಸಿ ಬರವಣಿಗೆಯ ರೂಪಕ್ಕಿಳಿಸಿದರೆ ಅದು ಹೆಚ್ಚು ಮೌಲಿಕವಾಗಿರುತ್ತದೆ. ಮುಂದೆ ಯಾವುದೇ ಉದ್ಯೋಗ ಅಥವಾ ಉದ್ಯಮಕ್ಕೆ ಸೇರಿಕೊಂಡರೂ ವಿದ್ಯಾರ್ಥಿಗಳು ರೂಢಿಸಿಕೊಳ್ಳುವ ಭಾಷಾಶೈಲಿ ಜೀವನದ ಎಲ್ಲಾ ಸಂದರ್ಭಗಳಲ್ಲಿಯೂ ಪಾತ್ರವಹಿಸುತ್ತದೆ” ಎಂದು ಉದಯವಾಣಿ ಪತ್ರಿಕೆಯ ಮಾರ್ಗದರ್ಶಕ ಸಂಪಾದಕರಾಗಿರುವ ಶ್ರೀ ಎನ್.ಗುರುರಾಜ್ ಅವರು ಅಭಿಪ್ರಾಯ ಪಟ್ಟರು.

 ಅವರು ಉಡುಪಿಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ 2010-11 ನೆಯ ಸಾಲಿನ ಕಾಲೇಜು ವಾರ್ಷಿಕಾಂಕ ‘ಸುಪ್ರಭಾ’ವನ್ನು ಬಿಡುಗಡೆಗೊಳಸಿ ಮಾತನಾಡುತ್ತಿದ್ದರು.

 ಕಾಲೇಜಿನ ಪ್ರಾಚಾರ್ಯ ಪ್ರೊ.ಕೃಷ್ಣಮೂರ್ತಿಯವರು ಅಧ್ಯಕ್ಷತೆ ವಹಿಸಿದ್ದರು. ಭಾಷಾ ವಿಭಾಗದ ಮುಖ್ಯಸ್ಥರಾದ ಡಾ|ಮಧುಸೂದನ ಭಟ್ ಇವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು, ಹಿಂದಿ ಉಪನ್ಯಾಸಕಿ ಶ್ರೀಮತಿ ನಿರ್ಮಲಾ ಶೆಣೈಯವರು ವಂದಿಸಿದರು, ಕನ್ನಡ ಉಪನ್ಯಾಸಕ ಡಾ|ವಸಂತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಸ್ನೇಹ ಸೌಹಾರ್ದ ಯಶಸ್ವೀ ಬದುಕಿನ ಗುಟ್ಟು

ದೇಶದ ಪ್ರತಿಯೊಬ್ಬ ನಾಗರಿಕನು ಸದ್ಭಾವನೆಯನ್ನು ಹೊಂದಿ ಸಮಾಜದ ಎಲ್ಲ ಜನಾಂಗದ ಜೊತೆಗೆ ಸ್ನೇಹ ಸೌಹಾರ್ದವನ್ನು ಬೆಳೆಸಿ ವ್ಯವಹರಿಸಿದಾಗ ಅವನ ಬದುಕು ಹಸನಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಪ್ರಸಿದ್ಧ ಉದ್ಯಮಿ ಬಾಲಾಜಿ ರಾಘವೇಂದ್ರಾಚಾರ್ಯರು ಹೇಳಿದರು.

ಅವರು ಇತ್ತೀಚೆಗೆ ಸ್ಥಳೀಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನಡೆದ ಸದ್ಭಾವನಾ  ದಿನ  ಮತ್ತು ಕೋಮು ಸೌಹಾರ್ದ ಪಕ್ಷಾಚರಣೆಯ ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಮಾತನಾಡುತ್ತಿದ್ದರು. ದ್ವೇಷ, ಅಸೂಯೆಗಳಿಂದ ಏನನ್ನು ಸಾಧಿಸಲೂ ಸಾಧ್ಯವಾಗದು. ಸ್ನೇಹ ಸೌಹಾರ್ದಗಳಿಗೆ ಮನೋವೈಶಾಲ್ಯವು ಅತ್ಯವಶ್ಯವಾಗಿದ್ದು ಸದ್ಭಾವನೆಯನ್ನು ಬೆಳೆಸಿಕೊಳ್ಳುವುದರಿಂದ ಮಾತ್ರ ಅದು ಸಾಧ್ಯವಾಗುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ.ಕೃಷ್ಣಮೂರ್ತಿ ಕೆ. ಇವರು ಭವ್ಯ ಭಾರತ ನಿರ್ಮಾಣದ ಕೆಲಸವು ಇಂದು ಯುವಪೀಳಿಗೆಯಿಂದ ಆಗಬೇಕಿದ್ದು ಸ್ನೇಹ ಸೌಹಾರ್ದಗಳನ್ನು ಬೆಳೆಸಿಕೊಳ್ಳುವ ಮೂಲಕ ಎಲ್ಲಾ ಕೋಮಿನ ಯುವಕರು ಅದಕ್ಕಾಗಿ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಕರೆ ಇತ್ತರು.

ಕಾಲೇಜಿನ ಹಿರಿಯ ಉಪನ್ಯಾಸಕ ಡಾ|ಮಧುಸೂದನ ಭಟ್ ಕೋಮು ಸೌಹಾರ್ದ ಪ್ರತಿಜ್ಞೆಯನ್ನು ಬೋಧಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್ ಸ್ವಾಗತಿಸಿದರು. ವಿದ್ಯಾರ್ಥಿ ಸುಚೀಂದ್ರ ಧನ್ಯವಾದವಿತ್ತರು. ವಿದ್ಯಾರ್ಥಿ ಜಯಂತ್ ಎಸ್.ಪಿ. ಕಾರ್ಯಕ್ರಮ ನಿರ್ವಹಿಸಿದರು.

 

ಸಮಷ್ಟಿಯ ಹಿತ ಸಂಸ್ಕೃತದ ವೈಶಿಷ್ಟ್ಯ

 

ಸಮಷ್ಟಿಯ ಹಿತವನ್ನು ಬಯಸದ ಮಂತ್ರಗಳೇ ಸಂಸ್ಕೃತದಲ್ಲಿಲ್ಲ. ಸಂಸ್ಕೃತದ ಪ್ರತಿಯೊಂದು ಮಂತ್ರಗಳು ಸಮಗ್ರಪ್ರಪಂಚದ ಹಿತವನ್ನು ಬಯಸುತ್ತವೆ. ಪ್ರತಿ ಪದಗಳು ನಿರ್ವಚನವನ್ನು ಹೊಂದಿದ್ದು ಅನ್ವರ್ಥ ಪದಗಳ ಗಡಣ ಸಂಸ್ಕೃತ ಭಾಷೆಯ ವೈಶಿಷ್ಟ್ಯ ಎಂಬುದಾಗಿ ಪ್ರಸಿದ್ಧ ಉದ್ಯಮಿ ಬಾಲಾಜಿ ಶ್ರೀ ರಾಘವೇಂದ್ರಾಚಾರ್ಯರು ಹೇಳಿದರು.

 ಅವರು ಇತ್ತೀಚೆಗೆ ಸ್ಥಳೀಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಯೋಜಿಸಲಾದ ಸಂಸ್ಕೃತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿಯೊಂದು ಪದಗಳ ಮೂಲವನ್ನು ಶೋಧಿಸಿದಾಗ ಭಗವಂತನನ್ನೇ ಪ್ರತಿಪಾದಿಸುತ್ತಿದ್ದು ರೂಢಿಯಿಂದಷ್ಟೇ ಜಗತ್ತಿನ ವ್ಯವಹಾರದಲ್ಲಿ ಅವು ಕಾಣಸಿಗುತ್ತವೆ.  ಪದಗಳ ನಿರ್ವಚನಗಳನ್ನು ಅರಿತು ವ್ಯವಹರಿಸಿದಾಗ ಸಂಸ್ಕೃತ ಭಾಷೆಯ ಸೊಬಗಿನ ಪೂರ್ಣ ಪರಿಚಯವಾಗುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು. ಭಗವದ್ಗೀತೆಯು ಇಂದು ವಿಶ್ವಮಾನ್ಯವಗಿರಲು ಅದು ಪ್ರತಿಪಾದಿಸಿದ ಒತ್ತಡ ರಹಿತ ವ್ಯವಹಾರ ನೀತಿಯೇ ಕಾರಣವಾಗಿದ್ದು ಈ ಕಾರಣದಿಂದಲೇ ಪಾಶ್ಚಾತ್ಯ ಶಿಕ್ಷಣ ಸಂಸ್ಥೆಗಳಲ್ಲಿ ಗೀತೆಯನ್ನು ಹೆಮ್ಮೆಯಿಂದ ಪಾಠ್ಯವಾಗಿ ಸ್ವೀಕರಿಸಿರುವಾಗ ನಮ್ಮಲ್ಲಿ ಅದಕ್ಕಾಗಿ ಮೀನಮೇಷ ಎಣಿಸುತ್ತಿರುವುದು ಖೇದಕರ ಎಂಬುದನ್ನೂ ಅವರು ಈ ಸಂದರ್ಭದಲ್ಲಿ ಹೇಳಿದರು.

 ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ.ಕೃಷ್ಣಮೂರ್ತಿ ಕೆ. ಇವರು ಭಾರತೀಯ ಸಂಸ್ಕೃತಿಯ ಪೂರ್ಣಪರಿಚಯ ಸಂಸ್ಕೃತದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

 ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ|ಮಧುಸೂದನ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿ ಸುಚೀಂದ್ರ ಧನ್ಯವಾದವಿತ್ತರು. ವಿದ್ಯಾರ್ಥಿ ಜಯಂತ್ ಎಸ್.ಪಿ ಕಾರ್ಯಕ್ರಮ ನಿರ್ವಹಿಸಿದರು.

 ಉದ್ಘಾಟನಾ ಕಾರ್ಯಕ್ರಮಾ ನಂತರ  ಸಂಸ್ಕೃತ ರಸಮಂಜರೀ ಕಾರ್ಯಕ್ರಮ ಜರಗಿತು.         ಕು| ಪ್ರತಿಮಾ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಎನ್.ಎಸ್.ಎಸ್.ನಿಂದ ಗ್ರಾಮಿಣ ಬದುಕಿನ ಸಮಗ್ರ ಅಧ್ಯಯನ

 ಲಾಲಾಜಿ ಆರ್.ಮೆಂಡನ್

ರಾಷ್ಟ್ರೀಯ ಸೇವಾಯೋಜನೆಯ ಮೂಲಕ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಗಾಂಧೀಜಿಯವರು ಮನಗಂಡಿದ್ದರು. ಸ್ವಾತಂತ್ರ್ಯಪೂರ್ವದ ಗಾಂಧೀಜಿಯವರ ಕನಸು ಸ್ವಾತಂತ್ರ್ಯಾ ನಂತರ ಅವರ ಜನ್ಮ ಶತಮಾನೋತ್ಸವ ವರ್ಷದಲ್ಲಿ (1969) ರಾಷ್ಟ್ರೀಯ ಸೇವಾಯೋಜನ ರೂಪದಲ್ಲಿ ಜಾರಿಗೆ ಬಂತು ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಭವ್ಯ ಭಾರತ ನಿರ್ಮಾಣದತ್ತ  ವಿದ್ಯಾರ್ಥಿಗಳು ಸಾಗಬೇಕು ಎಂದು ಕಾಪು ವಿಧಾನ ಸಭಾಕ್ಷೇತ್ರದ ಶಾಸಕರಾದ ಶ್ರೀ ಲಾಲಾಜಿ ಆರ್.ಮೆಂಡನ್ ಹೇಳಿದರು.

 ಅವರು ಇತ್ತೀಚೆಗೆ ಉದ್ಯಾವರದ ಪಿತ್ರೋಡಿಯ ಎಸ್.ಎಸ್. ಪಿತ್ರೋಡಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಮಂಗಳೂರು ವಿಶ್ವ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ, ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಗರ ಪ್ರದೇಶದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಗ್ರಾಮೀಣ ಬದುಕಿನ ಅಧ್ಯಯನಕ್ಕೆ ಇದೊಂದು ಪೂರಕ ವೇದಿಕೆಯಾಗಿದ್ದು ಗ್ರಾಮೀಣ ಪ್ರದೇಶದ ಸಮಗ್ರ ಅಧ್ಯಯನ ನಡೆದು ಸೇವಾಮನೋಭಾವದ ಭೂಮಿಕೆಯು ಇಲ್ಲಿ ನಿರ್ಮಾಣವಾಗಬೇಕಾಗಿಯೂ ಈ ಸಂದರ್ಭದಲ್ಲಿ ಅವರು ಹೇಳಿದರು.

 ಅತಿಥಿಗಳಾಗಿ ಆಗಮಿಸಿದ್ದ ಪ್ರಸಿದ್ಧ ಪತ್ರಕರ್ತರಾದ ಎಂ.ವಿ.ಕಾಮತ್ ಇವರು ಮಾತನಾಡಿ ಬದುಕಿನ ನಿರ್ದಿಷ್ಟ ಗುರಿಯನ್ನು ತಲುಪುವ ವೇದಿಕೆಯನ್ನಾಗಿ ರಾಷ್ಟ್ರೀಯ ಸೇವಾಯೋಜನೆಯನ್ನು ಬಳಸಿಕೊಳ್ಳ ಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

 ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕೃಷ್ಣಮೂರ್ತಿ ಕೆ. ಇವರು ಸಾಂಪ್ರದಾಯಿಕ ಶಿಕ್ಷಣ ಪಡೆಯುವುದರ ಜೊತೆಗೆ ದೇಶ ಪ್ರೇಮವನ್ನು ಮೂಡಿಸಿಕೊಳ್ಳಲು ರಾಷ್ಟ್ರೀಯ ಸೇವಾಯೋಜನೆಯ ಈ ಶಿಬಿರವು ಸಹಕಾರಿಯಾಗಿದ್ದು ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕಾದುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯ ಎಂದು ಹೇಳಿದರು.

 ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ದಿವಾಕರ್ ಕುಂದರ್, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗ್ರೇಸಿ ಮಚಾದೋ, ಉಡುಪಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಕಿರಣ್ ಕುಮಾರ್, ಎಸ್.ಎಸ್.ಸ್ಮಾರಕ ಎಜ್ಯುಕೇಶನ್ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀ ಮಹೇಶ್ ಯು, ಕುತ್ಪಾಡಿ ಮೀನು ಮಾರಾಟ ಸಹಕಾರಿ ಸಂಘ ಇದರು ಅಧ್ಯಕ್ಷರಾದ ಶ್ರೀ ಚಂದ್ರೇಶ್ ಕೆ. ಹಾಗೂ ಎಸ್.ಎಸ್.ಪಿತ್ರೋಡಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕುಸುಮ ಪಿ ವೇದಿಕೆಯಲ್ಲಿದ್ದರು.

 ಕಾಲೇಜಿನ ಕನ್ನಡ ಉಪನ್ಯಾಸಕ ಡಾ|ವಸಂತ್ ಕುಮಾರ್ ಪ್ರಾಸ್ತವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ರಾಷ್ಟ್ರೀಯ ಸೇವಾಯೋಜನೆಯ ಸಂಯೋಜಕ ಶ್ರೀ ರಾಜೇಶ್ ಕುಮಾರ್ ವಂದಿಸಿದರು, ಸಹಸಂಯೋಜಕ ಶ್ರೀ ಚಂದ್ರಶೇಖರ್ ಸಹಕರಿಸಿದರು, ಹಿರಿಯ ಉಪನ್ಯಾಸಕ ಡಾ|ಮಧುಸೂದನ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.

 

ಏಡ್ಸ್ ಜಾಗೃತಿ ಅರಿವು ಕಾರ್ಯಕ್ರಮ

ಸ್ಥಳೀಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಇತ್ತೀಚೆಗೆ ಏಡ್ಸ್  ಜಾಗೃತಿ ಅರಿವನ್ನು ಮೂಡಿಸುವ ಕಾರ್ಯಕ್ರಮ ಜರಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಯುನಿಸೆಪ್ ಪ್ರಾಯೋಜಿತ ಸಮಗ್ರ ಜಿಲ್ಲಾ ಏಡ್ಸ್ ನಿಯಂತ್ರಣ ಕಾರ್ಯಕ್ರಮ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಉಡುಪಿ ಇದರ ಯೋಜನ ಮುಖ್ಯಸ್ಥರಾದ ಪ್ರೊ.ಶ್ರೀಪತಿ ಇವರು ಏಡ್ಸ್ ಒಂದು ಮಾರಣಾಂತಿಕ ರೋಗವಾಗಿದ್ದು ಅದರ ಬಗೆಗಿನ ಜಾಗೃತಿಯ ಅರಿವನ್ನು ಪಡೆದುಕೊಳ್ಳುವುದರಿಂದ ಮಾತ್ರ ಆಂತಹ ರೋಗಗಳಿಂದ ದೂರವಿರಲು ಸಾಧ್ಯ ಎಂದು ಹೇಳಿದರು. ಶೈಕ್ಷಣಿಕ, ಔದ್ಯೋಗಿಕ ಮೊದಲಾದ ಕ್ಷೇತ್ರಗಳಲ್ಲಿ ನಮ್ಮ ಜಿಲ್ಲೆಯು ಅಗ್ರಗಣ್ಯವಾಗಿದ್ದು ಏಡ್ಸ್ ಅರಿವನ್ನು ಸಂಪಾದಿಸಿ ಇದರ ಮೂಲಕ ಏಡ್ಸ್ ಮುಕ್ತ ಜಿಲ್ಲೆಯಾಗಿಯೂ ನಾವು ಅಗ್ರಮಾನ್ಯವಾಗಬೇಕೆಂದು ತಿಳಿಹೇಳಿದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕೃಷ್ಣಮೂರ್ತಿ ಕೆ ಇವರು ಎಡ್ಸ್ ರೋಗವು ನಾನಾ ಮೂಲಗಳಿಂದ ಹರಡಬಹುದಾಗಿದ್ದು ಏಡ್ಸ್ ಸೋಂಕಿದೆ ಎಂಬ ಕಾರಣ ಮಾತ್ರದಿಂದ ಆತನನ್ನು ಅಸ್ಪೃಶ್ಯನನ್ನಾಗಿಸದೆ ಮುಖ್ಯ ವಾಹಿನಿಯಲ್ಲಿ ಆತನನ್ನೂ ನಡೆಸಿಕೊಂಡು ಹೋಗುವುದರಿಂದ ಮಾನಸಿಕ ಸ್ಥೈರ್ಯಧೈರ್ಯಗಳು ನೆಲಸಿ ಅವನಲ್ಲಿ ಆತ್ಮ ವಿಶ್ವಾಸ ಮೂಡುವುದಾಗಿ ಹೇಳಿದರು.

ಅನಂತರ ಛಾಯಾಚಿತ್ರಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸುವ ಪ್ರಾಯೋಗಿಕ ತರಬೇತಿ ನಡೆಯಿತು. ಎಂ.ಎಸ್.ಟಿ. ಜಿಲ್ಲಾ ಸಂಯೋಜಕರಾದ ಶ್ರೀ ಥಾಮಸ್ ಇವರು ಈ ಕಾರ್ಯಕ್ರಮದಲ್ಲಿ ಸಹಾಕರವಿತ್ತರು. ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ಸಹಸಂಯೋಜಕ ಶ್ರೀ ಚಂದ್ರಶೇಖರ್ ಸ್ವಾಗತಿಸಿದರು. ವಿದ್ಯಾರ್ಥಿನಿ ಅಖಿಲಾ ಭಟ್ ಧನ್ಯವಾದವಿತ್ತರು. ಮತ್ತೋರ್ವ ವಿದ್ಯಾರ್ಥಿನಿ ಪೂಜಾ ಕಾರ್ಯಕ್ರಮ ನಿರ್ವಹಿಸಿದರು.

ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು  - ವಾರ್ಷಿಕ ವಿಶೇಷ ಶಿಬಿರ

ಸ್ಥಳೀಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಡಿಸೆಂಬರ್ 24ರಿಂದ 30ರವರೆಗೆ ಉದ್ಯಾವರ ಪಿತ್ರೋಡಿಯ ಎಸ್.ಎಸ್.ಪಿತ್ರೋಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವುದು. ಕಾಪು ವಿಧಾನಸಭಾಕ್ಷೇತ್ರದ ಶಾಸಕರಾದ    ಶ್ರೀ ಲಾಲಾಜಿ ಮೆಂಡನ್ ಇವರು ಶಿಬಿರವನ್ನು ಉದ್ಘಾಟಿಸಲಿದ್ದು, ಮಲ್ಪೆಯ ಉದ್ಯಮಿಗಳಾದ    ಶ್ರೀ ಪ್ರಮೋದ ಮಧ್ವರಾಜ್ ಇವರು ಸಮಾರೋಪ ಭಾಷಣ ಮಾಡಲಿರುವರು. ರಾಷ್ಟ್ರೀಯ ಸೇವಾಯೋಜನೆ, ಬೆಂಗಳೂರಿನ ರಾಜ್ಯ ಸಂಪರ್ಕಾಧಿಕಾರಿಗಳಾದ ಡಾ.ಧನಂಜಯ ಕೆ.ಬಿ., ಬೆಂಗಳೂರಿನ ರಾಷ್ಟ್ರೀಯ ಸೇವಾಯೋಜನೆಯ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರಾದ          ಶ್ರೀ ಕೆ.ವಿ. ಖಾದ್ರಿ ನರಸಿಂಹಯ್ಯನವರು. ತರಬೇತಿ - ಇ.ಟಿ.ಐ ಧಾರವಾಡ ರಾಷ್ಟ್ರೀಯ ಸೇವಾಯೋಜನಾ ಕಾರ್ಯಕ್ರಮದ ಸಂಯೋಜನಾಧಿಕಾರಿಗಳಾದ ಡಾ.ಸೋಮಪ್ಪ ಎನ್ ಮೆಗೇರಿ ಇವರು ಶಿಬಿರದ ವಿಶೇಷ ಸಂದರ್ಶಕರಾಗಿರುವರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೃಷ್ಣಮೂರ್ತಿ ಕೆ., ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ಕೆ.ಚೆನ್ನಪ್ಪಗೌಡ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಸಂಯೋಜನಾಧಿಕಾರಿಗಳಾದ ಡಾ.ಗಣನಾಥ ಶೆಟ್ಟಿ ಎಕ್ಕಾರು ಇವರ ನಿರ್ದೇಶನದಲ್ಲಿ ಶಿಬಿರವು ಜರಗಲಿದ್ದು ಕಾಲೇಜಿನ ಉಪನ್ಯಾಸಕರಾದ ಶ್ರೀ ರಾಜೇಶ್ ಕುಮಾರ್ ಹಾಗೂ ಶ್ರೀ ಚಂದ್ರಶೇಖರ್ ಇವರು ಶಿಬಿರಾಧಿಕಾರಿಗಳಾಗಿರುವರು. ಪ್ರತಿನಿತ್ಯ ಶ್ರಮದಾನ, ಶೈಕ್ಷಣಿಕ ಕಾರ್ಯಕ್ರಮಗಳ ಜೊತೆಗೆ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿರುವುವು ಎಂಬುದಾಗಿ ಕಾಲೇಜಿನ ಪ್ರಾಚಾರ್ಯರು ಪ್ರೊ.ಕೃಷ್ಣಮೂರ್ತಿ ಕೆ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಉಪೇಂದ್ರ ಪೈ ಕಾಲೇಜಿನಲ್ಲಿ ಗ್ರಂಥಾಲಯ ಸಪ್ತಾಹ

ಉಪೇಂದ್ರ ಪೈ ಕಾಲೇಜಿನಲ್ಲಿ ಇತ್ತೀಚೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸ್ಥಳೀಯ ಎಂ.ಜಿ.ಎಂ. ಕಾಲೇಜಿನ ಗ್ರಂಥಪಾಲಕರಾದ ಶ್ರೀ ದೇವೇಂದ್ರ ಇವರು ಮುಖ್ಯ ಅತಿಥಿಗಳಾಗಿದ್ದರು. ಆಧುನಿಕ ತಾಂತ್ರಿಕ ಯುಗದಲ್ಲಿ ಗ್ರಂಥಾಲಯದ ಸಮಗ್ರ ಪುಸ್ತಕಗಳ ಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾದ ಸೌಕರ್ಯವನ್ನು ತಿಳಿಹೇಳುತ್ತ ಗ್ರಂಥಾಲಯದ ಸದ್ಬಳಕೆಯಿಂದ ಪರಿಪೂರ್ಣವಾದ ಜ್ಞಾನವನ್ನು ಪಡೆಯುವ ಅವಕಾಶವಿದ್ದು ಇದನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ಮಾರ್ಗದರ್ಶನವಿತ್ತರು. ಅಧ್ಯಕ್ಷಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕೃಷ್ಣಮೂರ್ತಿ ಕೆ. ಇವರು ವಿವರಣಾತ್ಮಕ ಗ್ರಂಥಗಳ ಅಧ್ಯಯನವು ಜ್ಞಾನದ ಔನ್ನತ್ಯಕ್ಕೆ ಕಾರಣವಾಗಿದ್ದು ಗ್ರಂಥಾಲಯಗಳು ಇದಕ್ಕೆ ಅವಕಾಶವನ್ನು ಕಲ್ಪಿಸಿಕೊಡುವುದಾಗಿ ಹೇಳಿದರು.

ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಸಾಮಾನ್ಯ ಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಿಜೇತರಿಗೆ ಈ ಸಂದರ್ಭದಲ್ಲಿ ಅಭ್ಯಾಗತರು ಬಹುಮಾನವನ್ನಿತ್ತರು.

ಕಾಲೇಜಿನ ಗ್ರಂಥಪಾಲಕಿ ಶ್ರೀಮತಿ ಪಲ್ಲವಿ ಪ್ರಾಸ್ತಾವಿಕ ಮಾತುಗಳನ್ನಾಡುವ ಮೂಲಕ ಕಾಯುಕ್ರಮ   ನಿರ್ವಹಿಸಿದರು. ವಿದ್ಯಾರ್ಥಿನಿ ಜಾನೆಟ್ ಡಿಸೋಜ ಸ್ವಾಗತಿಸಿದರು. ವಿದ್ಯಾರ್ಥಿನಿ ರಂಜಿತಾ ಎಚ್ ಎಸ್.ಧನ್ಯವಾದವಿತ್ತರು.

 

ವ್ಯಕ್ತಿತ್ವ ವಿಕಸನಕ್ಕೆ ಎನ್.ಎಸ್.ಎಸ್. ಸೂಕ್ತವೇದಿಕೆ-ಡಾ| ರಮೇಶ್ ಟಿ.ಎಸ್.

 
 

 

ವಿದ್ಯೆಯ ಜೊತೆಗೆ ವಿನಯ, ಮನೋನಿಗ್ರಹ, ಸಂಘಟನ ಶಕ್ತಿ, ಸಹಬಾಳ್ವೆ, ಸೌಹಾರ್ದ ಇವೇ ಮೊದಲಾದ ವ್ಯಕ್ತಿತ್ವದ ಸರ್ವಾಂಗೀಣ ವಿಕಸನಕ್ಕೆ ಎನ್.ಎಸ್.ಎಸ್. ಸೂಕ್ತವೇದಿಕೆ ಎಂದು ಪೂರ್ಣಪ್ರಜ್ಞಕಾಲೇಜಿನ ಸಂಸ್ಕೃತವಿಭಾಗ ಮುಖ್ಯಸ್ಥರಾದ ಡಾ|ರಮೇಶ್ ಟಿ.ಎಸ್ ಹೇಳಿದರು.

ಅವರು ಇತ್ತೀಚೆಗೆ ಸ್ಥಳೀಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ರಾಷ್ಟ್ರೀಯ ಸೇವಾಯೋಜನ ಘಟಕದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಂಪೂರ್ಣ ಸಾಕ್ಷರತೆಯ ಯಶಸ್ಸಿಗೆ ಗ್ರಾಮೀಣ ಸಾಕ್ಷರತೆಯು ಅನಿವಾರ್ಯವಾಗಿದ್ದು ರಾಷ್ಟ್ರೀಯ ಸೇವಾಯೋಜನೆಯ ಮೂಲಕ ಮಾತ್ರ ಅದು ಸಾಧ್ಯವಾಗುವುದಾಗಿ ಅವರು ಈ ಸಂದರ್ಭದಲ್ಲಿ ಹೇಳಿದರು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕೃಷ್ಣಮೂರ್ತಿ ಕೆ. ಇವರು ಸೇವಾಮನೋಭೂಮಿಕೆ ಒಂದೇ ಮಾನವನಿಗೆ ಇಂದು ಸಂತೃಪ್ತಿಯನ್ನು ನೀಡುತ್ತಿದ್ದು ಅದು ರಾಷ್ಟ್ರೀಯ ಸೇವಾಯೋಜನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾತ್ರ ಲಭಿಸುವುದಾಗಿ ಹೇಳಿದರು. ಉಪನ್ಯಾಸಕ ಶ್ರೀ ಚಂದ್ರಶೇಖರ್ ಸ್ವಾಗತಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾಧಿಕಾರಿ ಶ್ರೀರಾಜೇಶ್ ಕುಮಾರ್ ಧನ್ಯವಾದವಿತ್ತರು. ಪಠ್ಯೇತರ ಚಟುವಟಿಕೆಗಳ ಶಿಕ್ಷಕ ಸಂಯೋಜಕ ಡಾ|ಮಧುಸೂದನ ಭಟ್ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿನಿ ಪೂಜಾ ಕಾರ್ಯಕ್ರಮ ನಿರ್ವಹಿಸಿದರು.

 

 

 
 

ದಿನಾಂಕ 20.06.2011 ರಂದು ಅಂಬಲ್ಪಾಡಿಯ ಭವಾನೀ ಮಂಟಪದಲ್ಲಿ ನಡೆದ ಲೋಕಾಯುಕ್ತರಾದ ಜಸ್ಪಿಸ್ ಸಂತೋಷ ಹೆಗ್ಡೆ ಇವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ ತೃತೀಯ ಬಿ.ಬಿ.ಎಂ. ವಿದ್ಯಾರ್ಥಿ ಸತ್ಯರಾಜ್ ಇವರು ಸಕ್ರಿಯವಾಗಿ ಪಾಲ್ಗೊಂಡರು.

 

ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ 24.06.2011 ರಂದು ಪ್ರಥಮ ವರ್ಷದ ಪದವಿಯ ಹೊಸ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಯಿತು. ದ್ವಿತೀಯ ಹಾಗೂ ತೃತೀಯ ಪದವಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

 
 

 

 

 
 

ದಿನಾಂಕ 25.06.2011 ರಂದು ನಮ್ಮ ಕಾಲೇಜಿನಲ್ಲಿ ನಡೆದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕಿನ ರೀಜಿನಲ್ ಮ್ಯಾನೆಜರ್ ಶ್ರೀ ಕೆ.ಪಿ. ಪಾಂಡುರಂಗ ನಾಯಕ್ ಇವರು ಪಾಠಗಳನ್ನು ಕೇಳುವಲ್ಲಿ ಏಕಾಗ್ರತೆ, ವಿಷಯಗಳ ಮನನ, ಪರೀಕ್ಷೆಗಳಲ್ಲಿ ಆಯಾ ಪ್ರಶ್ನೆಗಳಿಗೆ ಉತ್ತರಿಸುವ ಕೌಶಲದ ಬಗ್ಗೆ ತರಬೇತಿ ನೀಡಿದರು.

 

ದಿನಾಂಕ 02.07.2011 ರಂದು ಕಾಲೇಜಿನಲ್ಲಿ ನಡೆದ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮದಲ್ಲಿ ಉಡುಪಿ ಟೈಮ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ವೃತ್ತಿ ತರಬೇತುದಾರರಾದ ಸಿ.ಜೆ.ಶರತ್ ಕುಮಾರ್ ಇವರು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿರುವ ವೃತ್ತಿ ಅವಕಾಶಗಳ ಬಗೆಗೆ ಮಾಹಿತಿ ನೀಡಿದರು.

 

 

 

 
 

.  ದಿನಾಂಕ 02.07.2011 ರಂದು ಕಾಲೇಜಿನಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಜರಗಿತು. ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಕೃಷ್ಣಮೂರ್ತಿ ಕೆ. ಇವರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಹಮ್ಮಿಕೊಂಡ ವಿವಿಧ ಸಹಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗೆಗೆ ಹೆತ್ತವರಿಗೆ ಮಾಹಿತಿ ನೀಡಿದರು.

 

ಮಾದಕದ್ರವ್ಯಗಳ ಸೇವನೆಯ ದುಷ್ಟರಿಣಾಮ ಮತ್ತು ಅದರ ನಿವಾರಣೋಪಾಯ ಎಂಬ ವಿಚಾರದಲ್ಲಿ ದಿನಾಂಕ 19.07.2011 ರಂದು ಉಡುಪಿ ಎ.ವಿ.ಬಾಳಿಗಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ|ಪಿ.ವಿ.ಭಂಡಾರಿಯವರು ಉಪನ್ಯಾಸ ನೀಡಿದರು.

 

Copyright © 2006-2009 Upendra Pai Memorial College.  All rights reserved. Designed@Maldives Computerss