![]() |
(A Unit of Dr. T.M.A. Pai Foundation, Manipal) |
|
![]() |
||
![]() |
||
![]() |
||
![]() |
||
![]() |
SPORTS |
|
![]() |
||
![]() |
||
|
|
||
ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ಕಾರ್ಕಳದ ಶ್ರೀ ಮಂಜುನಾಥ್ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ್ಕಾಲೇಜು ಮಟ್ಟದ ಬಾಲ್ ಬ್ಯಾಂಡ್ಮಿಟನ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನವನ್ನು ಗೆದ್ದುಕೊಂಡಿದ್ದಾರೆ. ವಿಜೇತ ವಿದ್ಯಾರ್ಥಿಗಳು ಫಲಕವನ್ನು ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಇವರಿಗೆ ಹಸ್ತಾಂತರಿಸಿದ್ದಾರೆ. ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. |
||
ಯು.ಪಿ.ಎಂ.ಸಿ - ವಾರ್ಷಿಕ ಕ್ರೀಡಾಕೂಟ |
||
|
||
ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ೨೬ನೇ ವಾರ್ಷಿಕ ಕ್ರೀಡಾ ಕೂಟವು ಪೆಬ್ರವರಿ ೧೭ರಂದು ಉಡುಪಿ ಅಜ್ಜರಕಾಡಿನ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರಗಿತು. ಸಿ.ಎ. ಎಸ್. ಪದ್ಮನಾಭ ಕೆದ್ಲಾಯ ಬ್ರಹ್ಮಾವರ ಇವರು ಕ್ರೀಡೋತ್ಸವವನ್ನು ಉದ್ಫಾಟಿಸಿ ದೈನಂದಿನ ಜಂಜಾಟ ಒತ್ತಡಗಳನ್ನು ದೂರ ಮಾಡಿ ಮನಶಾಂತಿ ನೀಡುವಲ್ಲಿ ಕ್ರೀಡೆಗಳು ಸಹಕಾರಿಯಾಗಿವೆ ಎಂದು ಹೇಳಿದರು. ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮನೋಹರ ಶೆಟ್ಟಿ ತೋನ್ಸೆ ಶುಭ ಹಾರೈಸಿದರು. ಉಪಪ್ರಾಂಶುಪಾಲೆ ಶ್ರೀಮತಿ ಆಶಾ ಅವಿನಾಶ್. ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಜಿ.ಸತ್ಯಪ್ರಕಾಶ್ ಸ್ವಾಗತಿಸಿದರು. ಈಶ್ವರ್ ಕುಮಾರ್ ಶರ್ಮಾ ಧನ್ಯವಾದವಿತ್ತರು. ಕ್ಲೈವ್ ನೊಲಾನ್ ಮಸ್ಕರೇನಸ್ ಕ್ರೀಡಾ ಸಂಹಿತೆಯನ್ನು ಬೋಧಿಸಿದರು. ಕುಮಾರಿ ಮಡೋನಾ ಎಡ್ವರ್ಡ್ ಸೋನ್ಸ್ ಕಾರ್ಯಕ್ರಮ ನಿರ್ವಹಿಸಿದರು. |
||
ಮಾಸ್ಟರ್ ಆತ್ಲೆಟಿಕ್ಸ್ ಚಾಂಪಿಯನ್‌ಶಿಪ್ |
||
|
||
೩೭ನೇ ರಾಜ್ಯಮಟ್ಟದ ಮಾಸ್ಟರ್ ಆತ್ಲೆಟಿಕ್ಸ್ ಚಾಂಪಿಯನ್‌ಶಿಪ್ ೨೦೧೬-೧೭ರ ಬೆಂಗಳೂರಿನ ವಿದ್ಯಾನಗರದಲ್ಲಿ ನಡೆದ ಕ್ರೀಡಾಕೂಟದಲ್ಲಿ ೪೫ರ ಮೇಲ್ಪಟ್ಟ ವಿಭಾಗದಲ್ಲಿ ಉಡುಪಿ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಅವರು ೧೦೦ ಮೀಟರ್ ಮತ್ತು ೨೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. |
||
ಶಿರ್ವ ಎಂ.ಎಸ್.ಆರ್.ಎಸ್. ಕಾಲೇಜಿಗೆ – ಯು.ಪಿ.ಎಂ.ಸಿ. ಟ್ರೋಫಿ |
||
|
||
ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಬೆಳ್ಳಿ ಹಬ್ಬದ ಪ್ರಯುಕ್ತ ಆಯೋಜಿಸಲಾದ ವಿ.ವಿ.ಮಟ್ಟದ ಅಂತರ್ಕಾಲೇಜು ಆಹ್ವಾನಿತ ವಾಲಿಬಾಲ್ ಪಂದ್ಯಾಟದಲ್ಲಿ ಶಿರ್ವದ ಎಂ.ಎಸ್.ಆರ್.ಎಸ್. ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿ ಯು.ಪಿ.ಎಂ.ಸಿ ಟ್ರೋಫಿ ಹಾಗೂ ನಗದು ರೂ. ೧೦,೦೦೦ ನ್ನು ಗೆದ್ದುಕೊಂಡಿದ್ದಾರೆ. ದ್ವಿತೀಯ ಸ್ಥಾನವನ್ನು ಬಾರ್ಕೂರ್ ಎಸ್.ಆರ್.ಎಸ್.ಎಂ., ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿ ನಗದು ರೂ.೭,೦೦೦ ಮತ್ತು ಶಾಶ್ವತ ಫಲಕವನ್ನು, ತೃತೀಯ ಸ್ಥಾನವನ್ನು ಕಟೀಲ್ ಎಸ್.ಡಿ.ಪಿ.ಟಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ವಿಜೇತರಾಗಿ ನಗದು ರೂ.೫,೦೦೦ ಮತ್ತು ಶಾಶ್ವತ ಫಲಕ, ಹಾಗೂ ಚತುರ್ಥ ಸ್ಥಾನವನ್ನು ಸರಕಾರಿ ಪದವಿ ಕಾಲೇಜು, ಕೋಟೇಶ್ವರ, ವಿದ್ಯಾರ್ಥಿಗಳು ವಿಜೇತರಾಗಿ ನಗದು ರೂ.೩,೦೦೦ ಮತ್ತು ಶಾಶ್ವತ ಫಲಕವನ್ನು ಗೆದ್ದು ಕೊಂಡಿದ್ದಾರೆ. ಬೆಸ್ಟ್ ಆಲ್‌ರೌಂಡರ್ : ಕಟೀಲ್ ಕಾಲೇಜಿನ - ಶಬರೀಶ್ ರೈ, ಬೆಸ್ಟ್ ಲಿಫ್ಟರ್ : ಬಾರ್ಕೂರು ಕಾಲೇಜಿನ ಲಕ್ಷ್ಮೀಶ್ ಮತ್ತು ಬೆಸ್ಟ್ ಎಟೆಕರ್ : ಶಿರ್ವಾ ಕಾಲೇಜಿನ ಪ್ರಮೋದ್ ಗೆದ್ದುಕೊಂಡಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತರಾದ ಕೃಷ್ಣಮೂರ್ತಿ ಆಚಾರ‍್ಯ, ವಿನುಗಾರಿಕ ಫೆಡರೇಶನ್ ಅಧ್ಯಕ್ಷರಾದ ಶ್ರೀಯುತ ಯಶ್ಪಾಲ್ ಎ.ಸುವರ್ಣ ಹಾಗೂ ಶ್ರೀಮತಿ ಜ್ಯೋತಿ ರಮನಾಥ್ ಶೆಟ್ಟಿಯವರು ಉಪಸಿತ್ಥರಿದ್ದು ಬಹುಮಾನ ವಿತರಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು. ಪೆರ್ಡೂರಿನ ಉಪೇಂದ್ರ ಅವರು ಕಾರ‍್ಯಕ್ರಮ ನಿರ್ವಹಿಸಿದರು. ಕುಮಾರಿ ಅನನ್ಯ ಅತಿಥಿಗಳನ್ನು ಸ್ವಾಗತಿಸಿ ವಂದನಾರ್ಪಣೆಯನ್ನು ನೆರವೇರಿಸಿದರು. |
||
ಯು.ಪಿ.ಎಂ.ಸಿ. – ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ |
||
|
||
ತರಗತಿಗಳಲ್ಲಿ ಪಡೆಯುವ ಜ್ಞಾನದ ಜೊತೆಗೆ ವಿದ್ಯಾರ್ಥಿಗಳು ಸುಪ್ತ್ರವಾಗಿರುವ ಅವರವರ ಪ್ರತಿಭೆಗಳನ್ನು ಅಭಿವ್ಯಕ್ತಗೊಳಿಸಲು ಪ್ರಯತ್ನಿಸಿದಾಗ ಮಾತ್ರ ಬದುಕಿನಲ್ಲಿ ಯಶಸ್ಸನ್ನು ಸಂಪಾದಿಸಬಹುದು. ಈ ನಿಟ್ಟಿನಲ್ಲಿ ಕ್ರೀಡೆಗಳು ಎಲ್ಲ ರೀತಿಯ ಜಾತಿ ವೈಷಮ್ಯಗಳನ್ನು ಮರೆತು ಎಲ್ಲಾ ಸಮಾಜ ಬಂಧುಗಳನ್ನು ಬೆಸೆಯುವ ಕೊಂಡಿಯಾಗಿ ಮೆರೆಯುತ್ತಿವೆ ಎಂದು ಉದ್ಯಮಿ ಶ್ರೀ ಅಮೃತ್ ಶೆಣೈ ಹೇಳಿದ್ದಾರೆ. ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಬೆಳ್ಳಿ ಹಬ್ಬ ಪ್ರಯುಕ್ತ ಮಾರ್ಚ್ ೧೧ ರಂದು ಆಯೋಜಿಸಲಾದ ಅಂತರ್ಕಾಲೇಜು ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಉದ್ಯಮಿಗಳಾದ ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀ ಅಶ್ರಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್‌ರ ಮಾರ್ಗದರ್ಶನದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅಯೋಜಿಸಿದರು. ವಿದ್ಯಾರ್ಥಿನಿಯಾದ ದೀಕ್ಷಾ ಸ್ವಾಗತಿಸಿದರು. ಕುಮಾರಿ ಅಂಕಿತಾ ವಂದಿಸಿದರು ಮತ್ತು ಕುಮಾರಿ ಅನನ್ಯಾ ಕಾರ್ಯಕ್ರಮ ನಿರ್ವಹಿಸಿದರು. |
||
ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಜತ ವರ್ಷ ಪ್ರಯುಕ್ತ ಹಳೆ ವಿದ್ಯಾರ್ಥಿಗಳ ಕ್ರೀಡಾ ಕೂಟವು ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಪೆಬ್ರವರಿ 12 ರಂದು ಜರಗಿತು. ಹಳೆ ವಿದ್ಯಾರ್ಥಿಗಳಿಗಾಗಿ 100 ಮೀಟರ್ ಓಟ ಹಾಗೂ ಗುಂಡು ಎಸೆತ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಹಳೆ ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಗಣೇಶ್ ಬ್ರಹ್ಮಾವರ ಪ್ರಥಮ ಸ್ಥಾನವನ್ನು, ಸಾಂಸ್ಕೃತಿಕ ಸಂಘದ ಮತೋರ್ವ ಸದಸ್ಯ ಶ್ರೀ ಗಿರೀಶ್ ಐತಾಳ ದ್ವಿತೀಯ ಸ್ಥಾನವನ್ನು ಹಾಗೂ ಉದ್ಯಮಿ ಮಕ್ಸೂದ್ ಅಹ್ಮದ್ ತೃತೀಯ ಸ್ಥಾನವನ್ನು ಪಡೆದರು. ಗುಂಡು ಎಸೆತದ ಪುರುಷರ ವಿಭಾಗದಲ್ಲಿ ಉದ್ಯಮಿ ಶ್ರೀ ಮಧುಸೂದನ್ ಪ್ರಥಮ ಸ್ಥಾನವನ್ನು, ಸಂಘದ ಅಧ್ಯಕ್ಷ ಶ್ರೀ ಮನೋಹರ್ ಶೆಟ್ಟಿ ದ್ವಿತೀಯ ಸ್ಥಾನವನ್ನು ಹಾಗೂ ಮಹಿಳೆಯರ ವಿಭಾಗದ ಗುಂಡೆಸೆತ ಸ್ಪರ್ಧೆಯಲ್ಲಿ ಶ್ರೀಮತಿ ಲತಾ ಪ್ರಥಮ ಸ್ಥಾನವನ್ನು, ಶ್ರೀಮತಿ ಸುಗುಣ ದ್ವಿತೀಯ ಸ್ಥಾನವನ್ನು ಹಾಗೂ ಸಂಘದ ಗೌರವಾಧ್ಯಕ್ಷತೆಯಾದ ಶ್ರೀಮತಿ ಪ್ರಭಾ ಕಾಮತ್ ತೃತೀಯ ಸ್ಥಾನವನ್ನು ಪಡೆದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ್ ಭಟ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. |
||
ರಶ್ಮಿತ್ ಆರ್ |
||
|
||
ಮೂಡುಬಿದ್ರೆ ಶ್ರೀ ಧವಳಾ ಕಾಲೇಜಿನಲ್ಲಿ ಡಿಸೆಂಬರ್ ೨೯ ರಂದು ನಡೆದ ಮಂಗಳೂರು
ವಿಶ್ವವಿದ್ಯಾನಿಲಯ ಅಂತರ್ಕಾಲೇಜು ಮಟ್ಟದ ದೇಹದಾಢ್ಯ ಸ್ಪರ್ಧೆಯ ೬೫ ಕೆ.ಜಿ. ವಿಭಾಗದಲ್ಲಿ
ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ತೃತೀಯ ಬಿ.ಕಾಂ. ವಿದ್ಯಾರ್ಥಿ ಶ್ರೀ
ರಶ್ಮಿತ್ ಆರ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
|
||
ಸುಬೋಧ್ ಎಸ್. ಕುಮಾರ್ |
||
|
||
ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್, ಅಲೈಡ್ ಆಟ್ಸ್ ವತಿಯಿಂದ ನವೆಂಬರ್ ೭ ಮತ್ತು ೮ ರಂದು ಹಳೆಯಂಗಡಿಯ ಶ್ರೀ ರಾಮಾನುಗ್ರಹ ಸಭಾಭವನದಲ್ಲಿ ಜರಗಿದ ೨೭ನೇ ರಾಜ್ಯಮಟ್ಟದ ಅಂತರ್ಡೊಜೋ ಕರಾಟೆ ಚಾಂಪಿಯನ್‌ಶಿಪ್‌ನ ಆರೆಂಜ್ ಹಾಗೂ ಗ್ರೀನ್ ಬೆಲ್ಟಿನ ೧೮ರ ಮೇಲಿನ ವಯೋಮಿತಿಯ ೬೫ ಕೆ.ಜಿ. ವಿಭಾಗದ ಕಟ ಹಾಗೂ ಕುಮಿಟೆ ಸ್ಪರ್ಧೆಯಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿ ಸುಬೋಧ್ ಎಸ್. ಕುಮಾರ್ ಇವರು ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. | ||
ವಿ.ವಿ. ಚೆಸ್ ತಂಡಕ್ಕೆ ಹೃದಯಸ್ವರ್ಶಿ ಬೀಳ್ಕೊಡುಗೆ |
||
|
||
ಅಕ್ಟೋಬರ್ ೬ ರಿಂದ ೧೦ ರವರೆಗೆ ಕೊಯಮತ್ತೂರಿನ ಅಮೃತ
ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ದಕ್ಷಿಣ ವಲಯ ಅಂತರ್ವಿಶ್ವವಿದ್ಯಾಲಯ ಚೆಸ್
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯ ಚೆಸ್ ತಂಡವನ್ನು
ಸಮವಸ್ತ್ರ ವಿತರಣೆಯ ಮೂಲಕ ಹೃದಯ ಸ್ವರ್ಶಿಯಾಗಿ ಬೀಳ್ಕೊಡುವ ಸಮಾರಂಭವು ಕುಂಜಿಬೆಟ್ಟು
ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯಿತು. ಮಂಗಳೂರು ವಿ.ವಿ.ಯ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾದ ಡಾ|ಕೇಶವ ಮೂರ್ತಿಯವರು ಸುಮಾರು ೯೦,೦೦೦ ವಿದ್ಯಾರ್ಥಿಗಳ ಪ್ರತಿನಿಧಿಗಳಾಗಿ ತೆರಳುತ್ತಿರುವ ಚೆಸ್ ತಂಡಕ್ಕೆ ಶುಭ ಹಾರೈಸಿದರು. ಕಾಲೇಜಿನ ಪ್ರಾಚಾರ್ಯ ಡಾ|ಮಧುಸೂದನ ಭಟ್, ವಿ.ವಿ.ಯ ಸಮವಸ್ತ್ರವನ್ನು ವಿತರಿಸಿ ವಿದಾಯ ಮಾತುಗಳನ್ನು ಹೇಳಿದರು. ಉಡುಪಿ ಮಂಗಳೂರು ಡೆರಿಕ್ ಚೆಸ್ ಸ್ಕೂಲ್‌ನ ನಿರ್ದೇಶಕರಾದ ಶ್ರೀ ಪ್ರಸನ್ನ ರಾವ್, ತಂಡದ ಮ್ಯಾನೇಜರ್ ಆಗಿರುವ ಯು.ಪಿ.ಎಂ.ಸಿ ಯ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಉಡುಪಿ ಯು.ಪಿ.ಎಂ.ಸಿ ಯ ಪ್ರಸನ್ನ ವಿ.ಹೆಗ್ಡೆ, ಪಿ.ಪಿ.ಸಿ. ಯ ನಿತಿನ್ ಎಸ್ ಶೆಟ್ಟಿ, ಪಿ.ಪಿ. ಸಂಧ್ಯಾಕಾಲೇಜಿನ ಸಾಕ್ಷಾತ್ ಯು.ಕೆ., ಎಂ.ಜಿ.ಎಂ. ಕಾಲೇಜಿನ ಗಣಪತಿ ಭಟ್, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸುಶ್ಮಿತಾ ರಾವ್ ಹಾಗೂ ಆಳ್ವಾಸ್ ಕಾಲೇಜು ಮೂಡಬಿದ್ರೆಯ ಆಶಿಕ್ ಡಿ.ಸಿ. ಇವರು ವಿ.ವಿ.ಯ ಚೆಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿ.ಐ.ಟಿ) ಯಲ್ಲಿ ಕಳೆದ ವರ್ಷ ನಡೆದ ದಕ್ಷಿಣ ಭಾರತ ಅಂತರ್ವಿಶ್ವವಿದ್ಯಾಲಯ ಚೆಸ್ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಐದನೇ ಸ್ಥಾನ ಗಳಿಸಿದ ಸಾಧನೆ ಗಮನಾರ್ಹವಾಗಿದೆ. |
||
ಬದುಕಿಗೆ ಹತ್ತಿರವಾದ ಕ್ರೀಡೆ ಚೆಸ್ - ಡಾ.ಎನ್.ವಿಜಯಬಲ್ಲಾಳ |
||
|
||
ಶತ್ರುಗಳು ಯಾವ ಸಂದರ್ಭದಲ್ಲಿ ಯಾವ ಮೂಲೆಯಿಂದಾದರೂ ಆಕ್ರಮಿಸಬಹುದು. ಅದನ್ನು ಸಮರ್ಥವಾಗಿ ತಡೆಗಟ್ಟಿ ನಿರ್ಭಯ ರಾಜಕೀಯವನ್ನು ನಡೆಸಬೇಕಾದುದು ರಾಜನ ಕರ್ತವ್ಯ. ಈ ನಿಟ್ಟಿನಲ್ಲಿ ಚೆಸ್ ಕ್ರೀಡೆಯು ಬದುಕಿಗೆ ತೀರ ಹತ್ತಿರವಾಗಿದೆ ಎಂದು ಅಂಬಲ್ಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಯಾದ ಡಾ. ಎನ್.ವಿಜಯ ಬಲ್ಲಾಳ್ ಹೇಳಿದರು. ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟಂಬರ್ ೩ ರಿಂದ ೫ ರವರೆಗೆ ನಡೆಯಲಿರುವ ಮಂಗಳೂರು ವಿಶ್ವವಿದ್ಯಾಲಯ ಅಂತರ್ಕಾಲೇಜು ಪುರುಷರ ಮತ್ತು ಮಹಿಳೆಯರ ಚೆಸ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಾನಸಿಕ ಕಸರತ್ತೇ, ಪ್ರಧಾನವಾಗಿರುವ ಚೆಸ್ ಕ್ರೀಡೆಯಲ್ಲಿ ಮನಸ್ಸಿನ ಸ್ಥಿರತೆಗೆ ಆರೋಗ್ಯ ಪೂರ್ಣ ಶಾರೀರಿಕ ದೃಢತೆ ಬೇಕು. ಜಯ, ಅಪಜಯ ಕ್ರೀಡೆಗಳಲ್ಲಿ ಸಾಮಾನ್ಯವಾಗಿದ್ದು ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಿದಾಗ ಎಂತಹ ಕಠಿಣ ಪರಿಸ್ಥಿತಿಯನ್ನೂ ನಿಭಾಯಿಸಬಹುದು. ಈ ನಿಟ್ಟಿನಲ್ಲಿ ಬುದ್ಧಿ ಕೌಶಲದ ಚೆಸ್ ಕ್ರೀಡೆ ಭವಿಷ್ಯದ ಕಾರ್ಯಕ್ಷೇತ್ರಗಳಲ್ಲಿ ಧೈರ್ಯದಿಂದ ಮುನ್ನುಗ್ಗುವ ಪ್ರಯತ್ನಕ್ಕೆ ನಾಂದಿಯಾಗಲಿ ಎಂದು ಹಾರೈಸಿದರು. ಉಡುಪಿ ಮಂಗಳೂರು ಸಹಕಾರಿ ಮೀನುಗಾರಿಕಾ ಫೆಡರೇಶನ್ ಇದರ ಅಧ್ಯಕ್ಷರಾದ ಶ್ರೀ ಯಶ್ಪಾಲ್ ಸುವರ್ಣ, ಸೈಂಟ್ ಮೇರಿಸ್, ಶಿರ್ವ ಇಲ್ಲಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೇಣು ಗೋಪಾಲಕೃಷ್ಣ ನೋಂಡಾ, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಮಡಿಕೇರಿ ಸೇರಿದಂತೆ ಪುರುಷರ ವಿಭಾಗದಲ್ಲಿ ೨೬ ತಂಡಗಳು, ಮಹಿಳಾ ವಿಬಾಗದಲ್ಲಿ ೧೭ ತಂಡಗಳು ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದವು. ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಅತಿಥಿಗಳನ್ನು ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಧನ್ಯವಾದವಿತ್ತರು. ಕನ್ನಡ ಉಪನ್ಯಾಸಕ ಡಾ|ವಸಂತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. |
||
ಈಜು ಸ್ವರ್ಧೆಯಲ್ಲಿ ಕಂಚಿನ ಪದಕ |
||
|
||
ಸೈಂಟ್ ಫಿಲೋಮಿನ ಕಾಲೇಜು, ಪುತ್ತೂರು ಇವರು ಇತ್ತೀಚೆಗೆ ಆಯೋಜಿಸಿದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಈಜು ಸ್ವರ್ಧೆಯ ಪುರುಷರ ವಿಭಾಗದ 1500 ಮೀಟರ್ ಫ್ರಿಸ್ಟೈಲ್ ಮತ್ತು 400 ಮೀ. ವೈಯಕ್ತಿಕ ಮಿಡ್ಲೆ ವಿಭಾಗದಲ್ಲಿ ಕಂಚಿನ ಪದಕಗಳನ್ನು ಪಡೆದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ದ್ವೀತಿಯ ಬಿ.ಕಾಮ್ ವಿದ್ಯಾರ್ಥಿ ಮೊಹಮದ್ ಫರ್‍ಹಾನ್ ಇವರನ್ನು ಕಾಲೇಜಿನ ಪ್ರಾಚಾರ್ಯರಾದ ಡಾ|ಮಧುಸೂದನ್ ಭಟ್ ಅಭಿನಂದಿಸಿದರು, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು |
||
ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು - ವಾರ್ಷಿಕ ಕ್ರೀಡೋತ್ಸವ |
||
|
||
ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 23 ನೇ ವಾರ್ಷಿಕ ಕ್ರೀಡೋತ್ಸವವು ಫೆಬ್ರವರಿ-೭ ರಂದು ಎ.ಎಲ್.ಎನ್ ರಾವ್ ಕ್ರೀಡಾಂಗಣದಲ್ಲಿ ಜರಗಿತು. ಕ್ರೀಡೋತ್ಸವವನ್ನು ಉದ್ಘಾಟಿಸಿದ ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು ಉಡುಪಿ ಇಲ್ಲಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರೋಶನ್ ಕುಮಾರ್ ಶೆಟ್ಟಿ ಇವರು ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಕ್ರೀಡಾಸಕ್ತಿಯಿಂದ ದೂರ ಉಳಿಯುವುದಕ್ಕೆ ಖೇದವನ್ನು ವ್ಯಕ್ತಪಡಿಸಿ ಮಾನಸಿಕ ದೈಹಿಕ ಒತ್ತಡಗಳನ್ನು ಸಂಪೂರ್ಣ ಪರಿಹರಿಸುವ ಕ್ರೀಡಾಕ್ಷೇತ್ರದಲ್ಲಿ ಹೆಚ್ಚಿನ ಒಲವನ್ನು ತೋರಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಮಧುಸೂದನ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಸ್ವಾಗತಿಸಿದರು. ವಿದ್ಯಾರ್ಥಿ ಅಭಿಷೇಕ್ ನಾರ್ವೇಕರ್ ಧನ್ಯವಾದವಿತ್ತರು. ವಿದ್ಯಾರ್ಥಿ ಶರತ್ ಕುಮಾರ್ ಕ್ರೀಡಾ ಸಂಹಿತೆಯನ್ನು ಬೋಧಿಸಿದರು. ವಿದ್ಯಾರ್ಥಿ ಅಭಿಷೇಕ್ ಕಾಶ್ಯಪ್ ಕಾರ್ಯಕ್ರಮ ನಿರ್ವಹಿಸಿದರು. |
||
ರನ್ನರ್ಸ್ ಅಪ್ |
||
|
||
ಡಾ.ಟಿ.ಎಂ.ಎ ಪೈ ಪೊಲಿಟೆಕ್ನಿಕ್, ಮಣಿಪಾಲ ಇವರು ನಡೆಸಿದ ಹಾರಿಝೋನ್ - ಜಿಲ್ಲಾಮಟ್ಟದ ಕ್ರೀಡಾಸ್ಪರ್ಧೆಯ ಪದವಿ ವಿಭಾಗದ ವಾಲಿಬಾಲ್ ಸ್ಪರ್ಧೆಯಲ್ಲಿ ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ರನ್ನರ್ಸ್ ಅಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ ಭಟ್, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ ಕೋಟ್ಯಾನ್ ಇವರ ಜೊತೆಗೆ ವಿಜೇತ ತಂಡವನ್ನು ಚಿತ್ರದಲ್ಲಿ ಕಾಣಬಹುದು. |
||
ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಥಮ ಬಿಬಿಎಂ ವಿದ್ಯಾರ್ಥಿ ಅಭಿಷೇಕ್ ಇವರು ಸಪ್ಟೆಂಬರ್ ೧೭ ರಂದು ಮಂಗಳೂರಿನ ರೊಸಾರಿಯೊ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ sಸ್ಟಡೀಸ್ ಇಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾಲಯದ ಅಂತರ್ಕಾಲೇಜು ರೆಸ್ಲಿಂಗ್ ಸ್ಪರ್ಧೆಯಲ್ಲಿ ೬೬ ಕೆ.ಜಿ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರು ಉಪ್ಪೂರಿನ ಕೃಷಿಕ ದಾಮೋದರ ಸೇರ್ವೆಗಾರ್ ಹಾಗೂ ಶ್ರೀಮತಿ ಚಂದ್ರಕಲಾ ಇವರ ಸುಪುತ್ರರಾಗಿದ್ದಾರೆ. |
||
ಚೆಸ್ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ |
||
|
||
ಎಂ.ಜಿ.ಎಂ. ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಮಂಗಳೂರು ವಿ.ವಿ. ಅಂತರ್ಕಾಲೇಜು ಮಟ್ಟದ ಚೆಸ್
ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ
ವಿದ್ಯಾರ್ಥಿಗಳು ಫಲಕವನ್ನು ಪ್ರಾಚಾರ್ಯರಾದ ಡಾ| ಮಧುಸೂದನ್ ಭಟ್ ಇವರಿಗೆ
ಹಸ್ತಾಂತರಿಸುತ್ತಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಈ
ಸಂದರ್ಭದಲ್ಲಿ ಉಪಸ್ಥಿತರಿದ್ದರು. |
||
PHYSICAL EDUCATION
|
||
1. Students are free to play from 4.40 p.m to 6.00 p.m
on all working days. 2. The Physical Director of the College nominates the captains of the various teams. 3. When representative teams are formed, players for the teams will be selected by the Physical Director from students who play regularly and attend coaching classes and intramural competitions. 4. When competitions are organized by the College only those who carry out the directions of the Physical Director and who are regular for practice, will be allowed to compete. Players whose records are excellent in the College will be permitted to participate in tournaments. 5. Students who receive games and sports materials should return them safely to the person who has issued them. 6. Students who are on the rolls of this College are not permitted to play in any outside team in any event against this College. |
Copyright © 2006-2009 Upendra Pai Memorial College. All rights reserved. Designed@Maldives Computers